ಚೇ..ನೀ ಇರಕಾಯ್ತ್‌ಯ..
ಇದ್ ಕಳ್ದ ಅಯ್ತಾರ ನಡ್ದ ೨೪ಕನ್ನಡ ಸಾಹಿತ್ಯ ಸಮ್ಮೇಳನಲಿ ಹೇಳ್ದ ಕವನ.. ಈ ಕವನ ಬರೆಕೂ ಒಂದ್ ಕಾರಣ ಉಟ್ಟು..., ನಾ ದಿನ ಬೊಳ್ಪುಗೆದ್ದ್ ಕೆಲ್ಸಕೆ ಹೋವ ದಾರಿಲಿ ಬೊಳ್ಪುಗೂ,ಹಿಂಬೊತ್ತು ಮನೆ ಒಳಗೆ ದೆಳಿಕರೆಲಿ ಕುದ್ದುಕಂಡ್ ಗೆಬ್ಬೊಳ್ಸುವ ಒಬ್ಬ ಉಗ್ಗಪನ ನೋಡಿ ಬರ್ದ ಕವನ ಇದ್... ಹೋಕನ ಬಾಕನ ಕಾಂಬಕನ ದೆಳಿ ಸೆರೆಲೇ ಒಂದ್ ನೆಗೆ ನೆಗಡ್ತಿದ್ದ.. ಅವರ ಮನೆ ಎದ್‌ರ ದೊಡ್ಡ ದೊಡ್ಡ ಕಾರ್‌ಗೊಳು ಒಳ ಒಮ್ಮೊಮ್ಮೆ ಮಙ,ಸೊಸೆ,ಪುಳ್ಳಿಕ ನಾಯಿನ ಕರ್ಕಂಡ್ ಮಾರ್ಗ ಉದ್ದಾಕೆ ನಡ್ಕಂಡ್ ಹೋದೂ ನೋಡ್ಯಳೆ.. ಅಜ್ಜಮಾತ್ರ ಹೊರಗೆ ಬಾದೊರ ನಾ ಕಂಡತ್ಲೆ...ಹಂಗೆ ಮೊನ್ನೆ ಆ ಮನೆಗೆ ತಾಂಗ್ಯಂಡೆ ಇರ್ವ ಆಚೆಮನೆ ಇನ್ನೊಬ್ಬ ಉಗ್ಗಪನೊಟಿಗೆ ಕೇಳ್ಕನ ಹೇಳ್ದ... ಅದ್ ಆ ಉಗ್ಗೊಪಂಗೆ ಈಗ ಎದ್ದ್ ಓಡಾಡಿಕೆಲ್ಲ ಬಙ ಆದೆಯ, ಉಗ್ಗೊವ ತೀರಿ ಹೋಗಿ ವರ್ಸ ಆಕಂಡ್ ಬಾತ್ ಅದರ್ಂದ ಮೇಲೆ ಹಿಂಗಾಗಳ್ದ್ ಅವು, ಮಙ ಸೊಸೆ ಎಲ್ಲ ದುಡ್ಡುತುಂಬಿ ಐಸುರಲಿ ಸತ್ತವೆ, ಹಂಗೆ ಪಾಪ ಈ ಉಗ್ಗಪ ಹಿಂಗೆ ಸಾಯಕೆ ಬಿದ್ದಳ್ದ್ಂತೇಳ್ದ...ಮೊನ್ನೆ ಒಮ್ಮೆ ಸಣ್ಣಕೆ ಮಳೆಬಾಕನ ಸೂರಡಿಲಿ ಕುದ್ದುಕಂಡ್ ಇದ್ದ. ಹಂಗೆ ಆ ಉಗ್ಗಪನ ಒಂದ್ ಒಳಮನ್ಸ್‌ಲಿ ಹೇಂಗೆ ಇರ್ದುಂತೇಳಿ ನೆನ್ಸಿಕಂಡ್ ಬರ್ದ ಕವನ ಇದ್.... *ಚೇ..ನೀ ಇರಕಾಯ್ತ್‌ಯ..* ಚೇ..ನೀ ಇರಕಾಯ್ತ್‌ಯ...; ಇಂದ್‌ನ ಈ ಮಳೆಗೆ,ಈ ಮನೆಗೆ. ಅಂದೆಲ್ಲ ಬೊಯ್ದಿರ್ವೆ ನಾ ನಿಂಗೆ , ಈಗ ಮಾತ್ರ ನೆಂಪಾದಿಯಾ ನೀ ನಂಗೆ... ಈ ನನ್ನ ಗತಿಗೆಟ್ಟ್‌ನ ಬೊದ್ಕ್ ನೋಡಿಕಾ...