ಚೇ..ನೀ ಇರಕಾಯ್ತ್‌ಯ..

 ಇದ್ ಕಳ್ದ ಅಯ್ತಾರ ನಡ್ದ ೨೪ಕನ್ನಡ ಸಾಹಿತ್ಯ ಸಮ್ಮೇಳನಲಿ ಹೇಳ್ದ ಕವನ..


ಈ ಕವನ ಬರೆಕೂ ಒಂದ್ ಕಾರಣ ಉಟ್ಟು‌..., ನಾ ದಿನ ಬೊಳ್ಪುಗೆದ್ದ್ ಕೆಲ್ಸಕೆ ಹೋವ ದಾರಿಲಿ ಬೊಳ್ಪುಗೂ,ಹಿಂಬೊತ್ತು ಮನೆ ಒಳಗೆ ದೆಳಿಕರೆಲಿ ಕುದ್ದುಕಂಡ್ ಗೆಬ್ಬೊಳ್ಸುವ ಒಬ್ಬ ಉಗ್ಗಪನ ನೋಡಿ ಬರ್ದ ಕವನ ಇದ್...

ಹೋಕನ ಬಾಕನ ಕಾಂಬಕನ ದೆಳಿ ಸೆರೆಲೇ ಒಂದ್ ನೆಗೆ ನೆಗಡ್ತಿದ್ದ..

ಅವರ ಮನೆ ಎದ್‌ರ ದೊಡ್ಡ ದೊಡ್ಡ ಕಾರ್‌ಗೊಳು ಒಳ ಒಮ್ಮೊಮ್ಮೆ ಮಙ,ಸೊಸೆ,ಪುಳ್ಳಿಕ ನಾಯಿನ ಕರ್ಕಂಡ್ ಮಾರ್ಗ ಉದ್ದಾಕೆ ನಡ್ಕಂಡ್ ಹೋದೂ ನೋಡ್ಯಳೆ..

ಅಜ್ಜಮಾತ್ರ ಹೊರಗೆ ಬಾದೊರ ನಾ ಕಂಡತ್ಲೆ...ಹಂಗೆ ಮೊನ್ನೆ ಆ ಮನೆಗೆ ತಾಂಗ್ಯಂಡೆ ಇರ್ವ ಆಚೆಮನೆ  ಇನ್ನೊಬ್ಬ ಉಗ್ಗಪನೊಟಿಗೆ ಕೇಳ್ಕನ ಹೇಳ್ದ‌...

ಅದ್ ಆ ಉಗ್ಗೊಪಂಗೆ ಈಗ ಎದ್ದ್ ಓಡಾಡಿಕೆಲ್ಲ ಬಙ ಆದೆಯ, ಉಗ್ಗೊವ ತೀರಿ ಹೋಗಿ ವರ್ಸ ಆಕಂಡ್ ಬಾತ್ ಅದರ್ಂದ ಮೇಲೆ ಹಿಂಗಾಗಳ್ದ್ ಅವು, ಮಙ ಸೊಸೆ ಎಲ್ಲ ದುಡ್ಡುತುಂಬಿ ಐಸುರಲಿ ಸತ್ತವೆ, ಹಂಗೆ ಪಾಪ ಈ ಉಗ್ಗಪ ಹಿಂಗೆ ಸಾಯಕೆ ಬಿದ್ದಳ್ದ್ಂತೇಳ್ದ...ಮೊನ್ನೆ ಒಮ್ಮೆ ಸಣ್ಣಕೆ ಮಳೆಬಾಕನ ಸೂರಡಿಲಿ ಕುದ್ದುಕಂಡ್ ಇದ್ದ.

ಹಂಗೆ ಆ ಉಗ್ಗಪನ ಒಂದ್ ಒಳಮನ್ಸ್‌ಲಿ ಹೇಂಗೆ ಇರ್ದುಂತೇಳಿ ನೆನ್ಸಿಕಂಡ್ ಬರ್ದ ಕವನ ಇದ್....



*ಚೇ..ನೀ ಇರಕಾಯ್ತ್‌ಯ..*


ಚೇ..ನೀ ಇರಕಾಯ್ತ್‌ಯ...;

ಇಂದ್‌ನ ಈ ಮಳೆಗೆ,ಈ ಮನೆಗೆ.

ಅಂದೆಲ್ಲ ಬೊಯ್ದಿರ್ವೆ ನಾ ನಿಂಗೆ ,

ಈಗ ಮಾತ್ರ ನೆಂಪಾದಿಯಾ ನೀ ನಂಗೆ...

ಈ ನನ್ನ ಗತಿಗೆಟ್ಟ್‌ನ ಬೊದ್ಕ್ ನೋಡಿಕಾರ್..,

ಒಟ್ಟೀಗೆ ನೀ ಇರಕಾಯ್ತ್‌ಯಾ....




ನೀ ಇರ್ಕನ ಮಕ್ಕ ಪಿಳ್ಳಿಕಂತ, ಬಾರಿ ಕುಸಿ ಇತ್ತ್...||

ಈಗಿಗ ಪ್ರಾಯ ಹೋದಾಂಗೆ ಬೊತ್ತೇ ಬೊತ್ತ್...||

ಓಯ್ ಇವ್ಳೇ; ನೀ ಹೋದಮೆಲಂತು ನಂಗೆ ಯಾರಿಲ್ಲೇಯ.,

ಹಿಡ್ದೊರು ಮುಟ್ಟಿರು ಎಲ್ಲೊನು ತಪ್ಪೇ.; ಕಾರಣ ನಾ ಗೊಜ್ಜೆಂತ ..

ಕೋಣೆ ಒಳಗೆ ಬಾರದೆ  ಗಂಜಿ ಕೊಡ್ವ ಬಟ್ಲ್ ನ ನೆಲಕೆ ನಿಗರ್ಸಿದ್.,

ಬಾಗ್ಲ್ ಪುಡೇಂದಳೆ ಹಾಂಗೆ,ನೂಕಿಹೋಕ್ಕನ್ನೆ ನಿನ್ನ

ನೆಂಪಾದೆಯಾ..;

ನಂಗೆ ಗಂಜಿ ಕೊಡಿಕಾರ್., ಇನ್ನ್ಒಸಿ ದಿನ., ನೀ ಇರಕಾಯ್ತ್‌ಯಾ....||



ಮಙ,ಸೊಸೆ,ಪುಳ್ಳಿಕ..., ನಾಯಿನ ಕುತ್ತಿಗೆಗೆ ಬೆಲ್ಟ್ ಹಾಕಿ 

ವಾಕಿಂಗ್ ಹೋದವೆ.,||

ಎದ್ದ್ ನಡೆಕಾಗದ ಈ ಪ್ರಾಯದ ಜೀವನ.,

ಎಲ್ಲರನೊಡುಲಿ ನಾಯಿಂದೊಳೂ ಕಡೆಮಾಡುವೆ...||

ಅಪ್ಪನೇ ದೇವ್ರುಂತ ಊರಿಡಿ ಹೇಳಿಕಂಡ್ ಇವರ್ದ್ ಬಿರ್ಸಾತಿಕೆಯಾ.,||

ನನ್ನ ಮಾತ್ರ ಕೋಣೆಒಳಗೆ ತಾಳಾಕಿ| ಇವು ಜಂಬ್ಬರ ಜಟ್ಟಿಂತ 

ಊರಿಡಿ ತಿರ್ಗುವೆಯ...||

ನೆಂಪಾದೆ ಇದರೆಲ್ಲ ನೋಡಿಕೆ.,  ಇನ್ನ್ಒಸಿ ದಿನ ನೀ ಇರಕಾಯ್ತ್‌ಯಾ....||



ನೀ ಹೋದದಿನ ಮಾತ್ರ ಎಲ್ಲವರ ಮೋರೆಲಿ ಎಪ್ಪೆಹಿಡ್ಸುವ ಮರ್ಡಟಯ.,||

ಕೊಳ್ಳಿ ಕೂಡ್ಸಿ,ಒಪ್ಪ ಮಾಡ್ಸಿ.; ಸರ್ಕ್ ತರ್ಸಿ, ಸ್ವರ್ಗ ಸೇರ್ಸಿ,

ನಿನ್ನ ಹದ್ನಾರ ರಾತ್ರೆ ಹೆಂಡ ಕುಡ್ಕಂಡ್ ಕುಣ್ಯಟಯ...||

ನಂಗೊಂದ್ ಅನ್ಮಾನಯ..,| ನೀ ಬೆಳ್ಸಿದ ಮಕ್ಕ ಇವ್ವೇನಾ...?||

ಯಾಕೆಂತೇಳ್ರೆ..

ಮಾರ್ನೆ ದಿನನೋಡ್ರೆ ನಿನ್ನ ಮೈಲಿದ್ದ ಚಿನ್ನದ ಪಾಲ್‌ಗೆ,|

ಮಙ,ಮಗಳ್.;ಅಳಿಯ,ಸೊಸೆಕಳ ಕಚ್ಚಿಕಣಟಯ...||

ಅದರ ಬುಡ್ಸಿಕಾರ್.,ಇನ್ನ್ ಒಸಿದಿನ ನೀ ಇರಕಾಯ್ತ್‌ಯ....



ಮೊನ್ನೆ ಮೊನ್ನೆ ಸೊಸೆ, ಮಙನೊಟಿಗೆ ಹೇಳ್ತಿತ್‌.;|

ಇನ್ನ್ ಇನ್ನ್ ದಿನ ಹೋದಾಂಗೆ ಬಾರಿ ಬಙಾಂತ.||

ಅದಸ್ಟ್ ಬೇಗ ವೃದ್ದಾಸ್ರಮ ಹುಡ್ಕೊಮೊಂತ..!!||

ನೀನೆ ಹೇಳ್ ಅಂದ್ ನಾವ್ಗೆ ಮಕ್ಕ ಇಲ್ಲದಿರ್ಕನ.;|

ನಿನ್ನ ಒತ್ತಾಯಕೆ ಆಸ್ರಮ ಸಾಲೆಗೆ ಹೋಗಿ,|

ಒಂದ್ ಮಙ ಮಗಳ ದತ್ತ್ ತಕಣ್ದೇ  ತಪ್ಪಾತ..?||

ಇವರ ಮಕ್ಕೊಳು ಹಿಂಗೆನೆ ಅಲಾ ಇವ್ಕೆ ..?;|

ಇವ್ಕು ಕಟ್ಟಿಸಿದ ಬುತ್ತಿನೇ ಬಲಾ...

ನೆಂಪಾದೆ ಇದರೆಲ್ಲ ನಿನ್ನೊಟಿಗೆ ಹೇಳಿಕಂಡ್..,

ಮರ್ಡಿಕಾರ್ ಇನ್ನ್‌ಒಸಿ ದಿನ ನೀ ಇರಕಾಯ್ತ್‌ಯಾ....

ನೀ ಇರಕಾಯ್ತ್‌ಯಾ....



*-ಕಾರ್ತಿಪದೇಲ*

Comments